Monday 13 December 2010

ಬ್ಲ್ಯಾಕ್ ಎಂಡ್ ವೈಟ್ ಪತ್ರಿಕೆಯಲ್ಲಿ ಒಂದು ಬಣ್ಣದ ಕಥೆ

ಕನ್ನಡದಲ್ಲಿ ಹಾಯ್ ಬೆಂಗಳೂರು ಅಂತ ಒಂದು ಪತ್ರಿಕೆ ಇದೆ. ಅದರ ಸಾರಥಿ ಹೆಸರು ರವಿ ಬೆಳಗೆರೆ ಅಂತ. ಓಳ್ಳೆಯ ಗೌರವ ಇದೆ. ಆದರೂ ಅದಕ್ಕೆ ತಕ್ಕಂತೆ ಒಮ್ಮೊಮ್ಮೆ ಬರೆಯುವುದಿಲ್ಲವಾದ್ದರಿಂದ ಪತ್ರಿಕೆಯನ್ನು ಯಾರೂ ಅಷ್ಟಾಗಿ ಸೀರಿಯಸ್ ಆಗಿ ಒದಿದ್ದನ್ನು ಕಾಣೆ. ಬರವಣಿಗೆ ನೋಡಿದರೆ ಪತ್ರಿಕೆ ಮಾರುಕಟ್ಟೆಗೆ ಬಂದ ಮರುಕ್ಷಣವೇ ರಾಜ್ಯವೇ ಬದಲಾಗಿಬಡುವುದೋ ಎಂಬಂತಿದ್ದರೂ ಸೊಂಟದ ಕೆಳಗಿನ ಭಾಷೆಯಲ್ಲಿ ಉಗಿಸಿಕೊಂಡವರ್ಯಾರೂ ಬದಲಾದಂತೆ ಇಲ್ಲ. ಅದಕ್ಕೆ ಕಾರಣ ಅವಾಗಾವಾಗೊಮ್ಮೆ ಪಾಪ ಬಡಪಾಯಿಗಳ ಮೇಲೆ ಹುರುಳಿಲ್ಲದ ಆರೋಪ ಮಾಡಿ ಗಲ್ಲು ಶಿಕ್ಷೆ ಆಗುವಂತ ಅಪರಾಧ ಮಾಡಿರುವಂತೆ ಚಿತ್ರಿಸಿಬಿಡುವುದು. ಪ್ರತಾಪ ಸಿಂಹನೆಂಬ ಪತ್ರಕರ್ತರ ಮೇಲೆ ಮಂತ್ರವಿಲ್ಲದ ಉಗುಳೇ ತುಂಬಿದ ಸಂಚಿಕೆ ಒಂದನ್ನು ಒದಿದ ಮೇಲೆ ಇದನ್ನು ಬರೆಯದಿರಲು ನನಗೆ ಮನಸ್ಸಾಗಲಿಲ್ಲ.

ಫೇಸ್ಬುಕ್ನಲ್ಲಿ ಬೆಳ್ಳಂಬೆಳಿಗ್ಗೆ ರವಿ ಬೆಳಗೆರೆ ಸ್ಟೇಟಸ್- ಭಟ್ಟರು ವಿ.ಕ.ಕ್ಕೆ ರಾಜೀನಾಮೆ ಕೊಟ್ಟಿದ್ದಾರೆ. ಪ್ರತಾಪ ಸಿಂಹ 50 ಲಕ್ಷ ರೂ ಹಗರಣದಲ್ಲಿ ಸಿಲುಕಿ ಬಿದ್ದಿದ್ದಾನೆ. ಇದು ಆವತ್ತಿನ ಹಾಯ್ ಮಾರುವ ಪಕ್ಕಾ ಉದ್ಯಮಿ ಪತ್ರಕರ್ತರ ಮಾತು ಎಂಬುದು ಗೊತ್ತಾದದ್ದು ಒಳಗೇನೂ ಏನೋ ಇದೆ ಎಂದು 14 ರೂ. ದಂಡ ಮಾಡಿ ಹಾಯ್ ಖರೀದಿಸಿದ ನಂತರವೇ. ಪ್ರತಾಪ ಸಿಂಹ ಯಾರ್ಯಾರದೋ ಕಾಲಿಗೆ ಬಿದ್ದು ಹೆಂಡತಿಯಾಗುವವಳ ಹೆಸರಲ್ಲಿ ಸಿಕ್ಕಾಪಟ್ಟೆ ಒದ್ದಾಡಿ ಅವಳನ್ನೇ ತಂಗಿ ಎಂದು ಒಂದು ಸರಕಾರಿ ಸೈಟ್ ಮಾಡಿಕೊಂಡಿದ್ದಾನಂತೆ, ಅದರ ಬೆಲೆ 50 ಲಕ್ಷ ಅಂತೆ(ಹಾಗಂತ ಎಂದಿನಂತೆ ರವಿ ಪರಮಾನು ಹೊರಡಿಸಿದ್ದಾರೆ). ಅದಕ್ಕೆ ರ.ಬೆ ಗೆ ಹೊಟ್ಟೆಯಲ್ಲಿ ತಳಮಳ ಎದ್ದು ಇಡೀ ಪತ್ರಿಕೆ ದಂಡ ಮಾಡಲಾಗಿದೆ. ಪ್ರತಾಪ ಸಿಂಹ ಹೊಲಸು ರಾಜಕೀಯದಲ್ಲಿ ಕೈ ಆಡಿಸಿದ್ದಾನೆ ಎಂಬಿತ್ಯಾದಿ ಆರೋಪ ಬಿಟ್ಟರೆ ಏನಿಲ್ಲ, ಏನೂ ಇಲ್ಲ. ಆತನಿಗೆ ಅಷ್ಟೊಂದು ರಾಜಕೀಯದಲ್ಲಿ ಕೈ ಆಡಿಸುವುದು ಕರತಾಮಲಕ ಆಗಿದ್ದರೆ, ಯಡ್ಡಿ- ಶೋಭ ಅವರೆಲ್ಲ ಇವನ ಪರವಾಗಿ ಲಾಭಿ ಮಾಡುವುದಾದರೆ ಒಂದು ಸೈಟ್ಗೆ ಯಾಕೆ ಆ ರೀತಿ ತೊಂದರೆ ಮಾಡಿಕೊಳ್ಳುತ್ತಿದ್ದ? ಮೈಸುಗರ್ ಬಿಲ್ಡಿಂಗ್ ಪಕ್ಕದಲ್ಲೆ ಮನೆ ಕಟ್ಟುತ್ತಿರಲಿಲ್ಲವೇ?

ಪದ್ಮನಾಗನಗರದ ಪುಟ್ಟಿ ಶ್ರೀನಗರದ ಕಿಟ್ಟಿ ಜೊತೆ ಮದುವೆ ಆದರೆ ಅದರೆ ಲೋಕೋದ್ಧಾರದ ಮದುವೆ. ಅದೇ ಪ್ರತಾಪ ಸಿಂಹ ಕಾಲಿಲ್ಲದ ಹುಡುಗಿ ಜೊತೆ ಮದುವೆ ಆದರೆ ಅದು ಲಾಭಕ್ಕೋಸ್ಕರ ಆದ ಮದುವೆ. ಅದಕ್ಕೆ ಕೇಸರಿ ಪರಿವಾರದಿಂದ ಇದು ತಲೆಹಿಡುಕ ಕೆಲಸ ಅಲ್ಲ ಅಂತ ಬೇರೆ ಸಟರ್ೀಫಿಕೇಟ್ ಬೇಕಂತೆ. ರವಿ ಬೆಳಗೆರೆ ಅಂತ ದೊಡ್ಡವರು (?) ಈ ಮಟ್ಟದಲ್ಲಿ ನಿಲ್ಲುವುದನ್ನು ಊಹಿಸಲಾಗದು. ಕಾಮ ಪ್ರೇಮದ ಬಗ್ಗೆ ನಾಲ್ಕು ಪೆಗ್ ಹಾಕಿ ದಿನವಿಡೀ ಬರೆದು ಜನೋದ್ಧಾರ ಮಾಡುವವರಂತೆ ಸಲಹೆ ನೀಡುವ ರವಿಗೆ ಈ ಮದುವೆ ಒಂದು ಬಿಸಿನೆಸ್ ಡೀಲ್ ಆಗಿ ಕಂಡಿದೆ. ಓ... ಇಂಥ ಮನಸ್ಸನ್ನೂ ನಾವು ಓದುತ್ತೇವೆ.

ಯಡ್ಡಿ ಶೋಭ ಬಗ್ಗೆ ಯಾವುದೋ ಕಾರಣಕ್ಕೆ ಓಳ್ಳೆ ಮಾತು ಬರೆದದ್ದನ್ನು ಇಸ್ಟುದ್ದದ ರಾದ್ಧಾಂತ ಮಾಡುವವರು ಕಳೆದ ಚುನಾವಣೆಯಲ್ಲಿ ಗಣಿ ಧಣಿಗಳ ಕಾಲಿನ ಅದಿರು ಬೆರೆತ ಧೂಳು ಒರೆಸಿ ಬಳ್ಳಾರಿ ಬಿಸಿ ಜಾಸ್ತಿ ಆಯಿತೆಂದು ಬಂದು ಕುಳಿತದ್ದನ್ನು ನಾವ್ಯಾರೂ ಮರೆತಿಲ್ಲ. ಬರುವ 30 ಸಾವಿರ ರೂ ಸಂಬಳಕ್ಕೆ ಸ್ಕೋಡಾ ಕೊಳ್ಳಲಾಗದಂತೆ. ಕನ್ನಡದಲ್ಲಿ ಬಿಕರಿಯಾಗುವ ವಾರಪತ್ರಿಕೆಯ ಸಂಖ್ಯೆಗೆ ಮತ್ತೇನು ಶಾಲೆ ಮಾತ್ರ ಕಟ್ಟಬಹುದೇ?

ಹಿಂದುಗಳ ಬಗ್ಗೆ ಬರೆದಿದ್ದೇ ದೊಡ್ಡ ತಪ್ಪಂತೆ. ಅದಕ್ಕೇ ಆತ ಸಮಾಜ ಘಾತುಕ! ಬೆಂಗಳೂರಿನ ಸಮಾಜ ಘಾತುಕರನ್ನು ಹೀರೋಗಳನ್ನಾಗಿ ಚಿತ್ರಿಸಿದವರು ಸಮಾಜ ಸೇವಕರು! ಹಿಂದುಗಳ ಬಗ್ಗೆ ಬರೆಯಲು ಧೈರ್ಯ ಬೇಕು. ಪ್ರತಾಪ ಸಿಂಹಗೆ ಆ ಧೈರ್ಯ ಇತ್ತು, ಬರೆದ, ಜನ ಓದಿದರು ವಿ.ಕ.ವನ್ನು ನಂ 1 ಮಾಡಿದರು. ವಿ.ಕ ಹಿಂದುಗಳ ಪರವಾಗಿ ನಿಜ ಹೇಳದು, ಅದೂ ಇತರ ಪತ್ರಿಕೆಗಳಂತೆ ಒಂದು ಸ್ಯೂಡೋ ಸೆಕ್ಯುಲಾರ್ ಅಂತ ಓಮ್ಮೆ ಗೊತ್ತಾದರೆ ಪುಕ್ಕಟ್ಟೆ ಕೊಟ್ಟರೂ ಓದುವವರಿರುವಿದಿಲ್ಲ. ಬಹುಶ ಪ್ರತಾಪ ಸಿಂಹ ಇನ್ನೊಂದು ಪತ್ರಿಕೆಗೆ ಬರೆದರೂ ಅದೇ ರೀತಿ ಮೊನಚಾಗಿಯೇ ಅದೇ ತತ್ವದ ಮೇಲೇ ಬರೆಯುತ್ತಾರೆಂಬ ನಂಬಿಕೆ ಇದೆ. ಬಳ್ಳಾರಿಯಲ್ಲೊಂದು ಬೆಂಗಳೂರಿನ್ನೊಂದು ಆಡುವ ಎರಡು ನಾಲಿಗೆ ಹಾವಂತೂ ಅಲ್ಲ.

ಅದಕ್ಕಿಂತ ಮುಖ್ಯವಾಗಿ ಅಪಕ್ವ ಲೇಖನವೊಂದನ್ನು ಪುರಸೊತ್ತಿಲ್ಲದಂತೆ ಪ್ರಕಟಿಸಿದ್ದಾದರೂ ಏಕೆ ಎಂಬ ಪ್ರಶ್ನೆ. ವಿಶ್ವೇಶ್ವರ ಭಟ್ಟರು ರಾಜೀನಾಮೆ ನೀಡಿರುವುದರಿಂದ ವಾತಾವರಣ ಸ್ವಲ್ಪ ಬಿಸಿಯಾಗಿದೆ. ಇಂತ ಸಂದರ್ಭದಲ್ಲೇ ಅದಕ್ಕೆ ಕಾರಣ ಪ್ರತಾಪ ಸಿಂಹ ಎಂಬಂತೆ ಚಿತ್ರಿಸಿಬಿಟ್ಟರೆ ಹಾಯ್ ಬೆಂಗಳೂರು ಸ್ವಲ್ಪ ಜಾಸ್ತಿ ಮಾರಾಟವಾಗುತ್ತದೆ. ಮೊದಲೇ ಆತನನ್ನು ಕಂಡರಾಗುವುದಿಲ್ಲ ಎಂದ ಮೇಲೆ ಹೆಸರು ಕೆಡಿಸಲು ಇದಕ್ಕಿಂತ ಒಳ್ಳೆಯ ಅವಕಾಶ ಎಲ್ಲಿ ಸಿಕ್ಕೀತು?

ಮದುವೆಯೊಂದನ್ನು ಹಾದರ ಎನ್ನುವಂತೆ ಚಿತ್ರಿಸಿದ ಹಾಯ್ ಬೆಂಗಳೂರಿನ ಕೊನೆಯ ಸಂಚಿಕೆ ಓದಿದ್ದೇನೆ. ಮತ್ತೊಮ್ಮೆ ಅದನ್ನು ಖರೀದಿಸಿ ಓದಲಾರದಷ್ಟು ಹೇಸಿಗೆ ಹುಟ್ಟಿದೆ.

Keywords: Pratap Simha, Hai Bangalore, Ravi Belagere, Pratap Simha Scam, Vijay Karnataka, Vijaya Karnataka, Facebook

Search Rising Indian


Related Posts Plugin for WordPress, Blogger...